Madhwa Navami
Source: MYP Yahoo Group
ಹರೇ ಶ್ರೀನಿವಾಸ
ಮಧ್ವ ನವರತ್ತ್ರೋತ್ಸವದ ಶುಭ ಸಮಾರಮ್ಭದಲ್ಲಿ ಕೆಲವು ಅಪೂರ್ವ ಸನ್ಗತಿಗಳನ್ನು ತಿಳಿದುಕೊಳ್ಳೊಣ.
ಇದು ಶ್ರೀಮದಾಚಾರ್ಯರ ಅನುಗ್ರಹಕ್ಕೆ ಪಾತ್ರರಾಗಲು ಒನ್ದು ಮೆಟ್ಟಿಲು.
ಆಚಾರ್ಯ ಶ್ರೀಮಧ್ವರು ತಮ್ಮ ಸಾಕ್ಷಾತ್ ಶಿಷ್ಯ ತ್ರಿವಿಕ್ರಮ ಪ೦ಡಿತಾಚಾರ್ಯರಿಗೆ ತಮ್ಮ ಬ್ರಹ್ಮಸೂತ್ರಭಾಷ್ಯಕ್ಕೆ ಟೀಕೆಯೊ೦ದು ರಚಿಸಲು ಆದೇಶವಿತ್ತು, ಜ್ನಾನ ಕಾರ್ಯದಲ್ಲಿ ಗ್ರಹಸ್ಥಾಶ್ರಮವೆ೦ದೂ ಅಡ್ಡಿಯಾಗಬೇಕಿಲ್ಲವೆ೦ಬ ಪ್ರಮೇಯವನ್ನು ತಿಳಿಸಿಕೊಟ್ಟಿದ್ದಾರೆ.
ಇದು ಗ್ರ೦ಥ ಬರೆಯಬಲ್ಲ ಇಡೀ ಗ್ರಹಸ್ಥ ವ್ರ೦ದಕ್ಕೇ ನೀಡಿದ ಆದೇಶವಾಗಿದೆ ಎ೦ದರೂ ತಪ್ಪಲ್ಲ.
ಆಗ ತ್ರಿವಿಕ್ರಮ ಪ೦ಡಿತರ ಸಹೋದರ ಶ೦ಕರ ಪ೦ಡಿತರು,ಪುತ್ರ ನಾರಾಯಣಪ೦ಡಿತರು...ಅನ೦ತರ ಕಾಲ ಕಾಲಕ್ಕೆ ನೂರಾರು ಗ್ರಹಸ್ಥ ವಿಭೂತಿಗಳು ಅನೇಕ ರೀತಿಯಲ್ಲಿ ಜ್ನಾನ ಪ್ರಚುರ ಜೀವನ ಸಾಗಿಸಿದ್ದಾರೆ. ಅನೇಕ ಉತ್ತಮ ಟಿಪ್ಪಣಿಗಳನ್ನು ರಚಿಸಿ, ಪಾಠಪ್ರವಚನಗಳಿ೦ದ ಅನೇಕ ಶಿಷ್ಯರುಗಳನ್ನು ಗಳಿಸಿದ್ದಾರೆ.
ತಪಶ್ಯಕ್ತಿಯಿ೦ದ ಆರ್ತರನ್ನು ಉಧ್ಧರಿಸಿದ್ದಾರೆ. ಸಮಾಜಕ್ಕೆ ಸುಜ್ನಾನದ ಬೆಳಕನ್ನು ನೀಡಿದ್ದಾರೆ.
ಇದಕ್ಕೆಲ್ಲ ಮೂಲ ಕಾರಣ ಆಚಾರ್ಯಮಧ್ವರ ಆದೇಶ ಮುದ್ರೆಯೆ೦ಬುದು ಗಮನೀಯ ಅ೦ಶ.
ತ್ರಿವಿಕ್ರಮ ಪ೦ಡಿತರು,ನಾರಾಯಣಪ೦ಡಿತರು ಮೊದಲಾದವರ ಕೄತಿಗಳು ಶ್ರೀವ್ಯಾಸರಾಜರು, ಶ್ರೀ ವಾದಿರಾಜರು, ಶ್ರೀ ರಾಘವೇ೦ದ್ರರು ಮು೦ತಾದವರಿ೦ದ ಉದಾಹೄತವೂ ಆಗಿದೆ.
ಇ೦ತಹ ವಿದ್ವಾ೦ಸರ ಅನೇಕ ಮನೆತನಗಳು ಗುರು ಪೀಠ ಪರ೦ಪರೆಗಳ೦ತೆ ಜ್ನಾನ ಪ್ರಚಾರದೀಕ್ಷೆ ಹೊತ್ತು ನೂರಾರು ವರ್ಷ ಬಾಳಿವೆ.
ಅವುಗಳಲ್ಲಿ ಆದ್ಯ, ಶ್ರೀಮುಷ್ಣ, ಬಿದರಹಳ್ಳಿ, ಲಿ೦ಘೇರಿ, ಛಲಾರಿ, ಉಮರ್ಜೀ, ಪಾ೦ಡುರ೦ಗಿ, ಗಲಗಲಿ, ತಾಮ್ರಪರ್ಣಿ ಮೊದಲಾದ ಅನೇಕ ಮನೆತನಗಳು ಇ೦ದಿಗೂ ಸಕ್ರೀಯವಾಗಿ ಜೀವ೦ತವಿವೆ.
ಗಮನೀಯವಾದ ಗೄ೦ಥಕಾರರಲ್ಲಿ, ’ವಾದರತ್ನಾವಲೀ’ ವಿಷ್ಣುದಾಸಾಚಾರ್ಯರು, ಭಾಗವತ ಟಿಪ್ಪಣಿಕಾರರಾದ ಶ್ರೀ ಯಾದವಾರ್ಯರು( ೧೫೪೧-೧೬೪೬) ಅತ್ಯ೦ತ ಪ್ರಮುಖರು.
ಅದರಲ್ಲೂ ಯಾದವಾರ್ಯರದು ಅದ್ಭುತ ಸಾಧನೆ. ಇವರ ಗುರುಗಳು ಮಹಾ ತಪಸ್ವಿಗಳಾದ ಶ್ರೀ ವೇದೇಶ ತೀರ್ಥರು(ಯಾದವಾರ್ಯರ ಪೂರ್ವಾಶ್ರಮದ ಅಣ್ಣ, ಶ್ರೀ ರಘೂತ್ತಮ ತೀರ್ಥರ ಶಿಷ್ಯರು). ಶ್ರೀ ವೇದೇಶ ತೀರ್ಥರು ಯಾದವಾರ್ಯರ ಜ್ನಾನೋನ್ನತಿಗಾಗಿಯೆ ಪೀಠ ಬಿಟ್ಟರು. ಮಣ್ಣೂರಿನಲ್ಲಿಯೆ ನೆಲೆಸಿದರು.
ಗ್ರಹಸ್ಥಗ್ರ೦ಥಕಾರರಾಗಿ ಪಾಠ-ಪ್ರವಚನಗಳನ್ನು ಬಹಳ ವ್ಯಾಪಕವಾಗಿ ನಡೆಸಿದ ದಾಖಲೆ ಶ್ರೀ ಯಾದವಾರ್ಯರದು( ೧೫೪೧-೧೬೪೬). ಈ ಕೆಳಗಿನ ಮನೆತನಗಳು ಇವರ ಪ್ರಧಾನ ಶಿಷ್ಯರುಗಳಾಗಿ ಪ್ರಸಿಧ್ಧಿ ಹೊ೦ದಿದ್ದಾರೆ.
೧) ಬಿದರಹಳ್ಳಿ ೨) ಲಿ೦ಗೇರಿ ೩)ಶರ್ಕರಾ ೪)ಬ೦ಕಾಪುರ, ೫)ಗೂರ್ಜರಿ, ೬)ಉಮರ್ಜೀ, ೭) ಆಯೀ,
೮) ಕಾಡಣಿ
ಬಿದರಹಳ್ಳಿ ಶ್ರೀನಿವಾಸತೀರ್ಥರು ಇವರ ಹತ್ತಿರದ ಸ೦ಬ೦ಧಿಗಳೂ ಆಗಿದ್ದರು.
ಯಾದವಾರ್ಯರ ಸಮಕಾಲೀನರು ಈ ಕೆಳಗಿನವರು"
೧) ಶ್ರೀ ರಘೂತ್ತಮ ತೀರ್ಥರು ೨)ಶ್ರೀ ವೇದವ್ಯಾಸ ತೀರ್ಥರು, ೩)ಶ್ರೀ ವಿದ್ಯಾಧೀಶ ತೀರ್ಥರು, ೪)ಶ್ರೀ ವೇದನಿಧಿ ತೀರ್ಥರು, ೫)ಶ್ರೀ ಸತ್ಯವ್ರತ ತೀರ್ಥರು, ೬)ಶ್ರೀ ಸುಧೀ೦ದ್ರ ತೀರ್ಥರು,೭)ಶ್ರೀ ರಾಘವೇ೦ದ್ರ ತೀರ್ಥರು, ೮)ವ್ಯಾಸರಾಜ ಮಠದ ಶ್ರೀ ಲಕ್ಶ್ಮೀಕಾ೦ತ ತೀರ್ಥರು, ಶ್ರೀ ಪತಿ ತೀರ್ಥರು ಮತ್ತು ಕ೦ಬಾಲೂರು ರಾಮಚ೦ದ್ರ ತೀರ್ಥರು. ಮೊದಲಾದ ಮಹನೀಯರು.
ಯಾದವಾರ್ಯರ( ೧೫೪೧-೧೬೪೬) ಗ್ರ೦ಥಗಳು:
೧) ಶ್ರೀ ವೇದವ್ಯಾಸ ಗದ್ಯಮ್ ೨) ಶ್ರೀ(ವೇದವ್ಯಾಸ)ಕರಾವಲ೦ಬನ ಸ್ತೋತ್ರಮ್,
೩)ದಾರಿದ್ರ್ಯಹರ ಸ್ತೋತ್ರಮ್
೪)ಶ್ರೀಲಕ್ಷ್ಮ್ಯಷ್ಟಕಮ್
೫)ಶ್ರೀ ಮಧ್ವಸ್ತುತಿಃ
೬)ಶ್ರೀ ಪೂರ್‍ಣಪ್ರಜ್ನ ಗ್ರ೦ಥಮಲಿಕಾ ಸ್ತುತಿಃ
೭)ಶ್ರೀಮದ್ಭಾಗವತ ತಾತ್ಪರ್ಯ ಟೀಕಾಃ
೮)ನ್ಯಾಯಸುಧಾ ಟಿಪ್ಪಣಿ
೯)ಯಮಕ ಭಾರತ ಟೀಕಾ
೧೦)ತತ್ವಸ೦ಖ್ಯಾನ ಟೀಕಾ
೧೧)ತತ್ವದ್ಯೋತ ಟಿಪ್ಪಣಿ
ಪ್ರಮುಖವಾದವುಗಳು.
ಶ್ರೀ ಮಧ್ವ ನವಮಿಯ ಶುಭ ಸ೦ದರ್ಭದಲ್ಲಿ ಯಾದವಾರ್ಯರ ಸ್ಮರಿಸಿ, ಅಚಾರ್ಯ ಮಧ್ವರ ಕರುಣಕ್ಕೆ ಪಾತ್ರರಾಗೋಣ.
ಶ್ರೀಕೄಷ್ಣಾರ್ಪಣಮಸ್ತು.
(ಆಧಾರ - ಶ್ರೀ ಪ್ರಭ೦ಜನಚಾರ್ಯರ ಶ್ರೀ ಯಾದವಾರ್ಯ ಕೄತಿಮ೦ಜರೀ(೧೯೮೭))
हरे श्रीनिवास
मध्व नवरत्त्रोत्सवद शुभ समारम्भदल्लि कॆलवु अपूर्व सन्गतिगळन्नु तिळिदुकॊळ्ळॊण. इदु श्रीमदाचार्यर अनुग्रहक्कॆ पात्ररागलु ऒन्दु मॆट्टिलु.
आचार्य श्रीमध्वरु तम्म साक्षात् शिष्य त्रिविक्रम प०डिताचार्यरिगॆ तम्म ब्रह्मसूत्रभाष्यक्कॆ टीकॆयॊ०दु रचिसलु आदेशवित्तु, ज्नान कार्यदल्लि ग्रहस्थाश्रमवॆ०दू अड्डियागबेकिल्लवॆ०ब प्रमेयवन्नु तिळिसिकॊट्टिद्दारॆ. इदु ग्र०थ बरॆयबल्ल इडी ग्रहस्थ व्र०दक्के
नीडिद आदेशवागिदॆ ऎ०दरू तप्पल्ल.
आग त्रिविक्रम प०डितर सहोदर श०कर प०डितरु,पुत्र नारायणप०डितरु...अन०तर काल कालक्कॆ नूरारु ग्रहस्थ विभूतिगळु अनेक रीतियल्लि ज्नान प्रचुर जीवन सागिसिद्दारॆ. अनेक उत्तम टिप्पणिगळन्नु रचिसि, पाठप्रवचनगळि०द अनेक शिष्यरुगळन्नु गळिसिद्दारॆ. तपश्यक्तियि०द आर्तरन्नु उध्धरिसिद्दारॆ. समाजक्कॆ सुज्नानद बॆळकन्नु नीडिद्दारॆ.
इदक्कॆल्ल मूल कारण आचार्यमध्वर आदेश मुद्रॆयॆ०बुदु गमनीय अ०श.
त्रिविक्रम प०डितरु,नारायणप०डितरु मॊदलादवर कॄतिगळु श्रीव्यासराजरु, श्री वादिराजरु, श्री राघवे०द्ररु मु०तादवरि०द उदाहॄतवू आगिदॆ.
इ०तह विद्वा०सर अनेक मनॆतनगळु गुरु पीठ पर०परॆगळ०तॆ ज्नान प्रचारदीक्षॆ हॊत्तु नूरारु वर्ष बाळिवॆ.
अवुगळल्लि आद्य, श्रीमुष्ण, बिदरहळ्ळि, लि०घेरि, छलारि, उमर्जी, पा०डुर०गि, गलगलि, ताम्रपर्णि मॊदलाद अनेक मनॆतनगळु इ०दिगू सक्रीयवागि जीव०तविवॆ.
गमनीयवाद गॄ०थकाररल्लि, ’वादरत्नावली’ विष्णुदासाचार्यरु, भागवत टिप्पणिकारराद श्री यादवार्यरु( १५४१-१६४६) अत्य०त प्रमुखरु.
अदरल्लू यादवार्यरदु अद्भुत साधनॆ. इवर गुरुगळु महा तपस्विगळाद श्री वेदेश तीर्थरु(यादवार्यर पूर्वाश्रमद अण्ण, श्री रघूत्तम तीर्थर शिष्यरु). श्री वेदेश तीर्थरु यादवार्यर ज्नानोन्नतिगागियॆ पीठ बिट्टरु. मण्णूरिनल्लियॆ नॆलॆसिदरु.
ग्रहस्थग्र०थकाररागि पाठ-प्रवचनगळन्नु बहळ व्यापकवागि नडॆसिद दाखलॆ श्री यादवार्यरदु( १५४१-१६४६). ई कॆळगिन मनॆतनगळु इवर प्रधान शिष्यरुगळागि प्रसिध्धि हॊ०दिद्दारॆ.
१) बिदरहळ्ळि २) लि०गेरि ३)शर्करा ४)ब०कापुर, ५)गूर्जरि, ६)उमर्जी, ७) आयी, ८) काडणि
बिदरहळ्ळि श्रीनिवासतीर्थरु इवर हत्तिरद स०ब०धिगळू आगिद्दरु.
यादवार्यर समकालीनरु ई कॆळगिनवरु"
१) श्री रघूत्तम तीर्थरु २)श्री वेदव्यास तीर्थरु, ३)श्री विद्याधीश तीर्थरु, ४)श्री वेदनिधि तीर्थरु, ५)श्री सत्यव्रत तीर्थरु, ६)श्री सुधी०द्र तीर्थरु,७)श्री राघवे०द्र तीर्थरु, ८)व्यासराज मठद श्री लक्श्मीका०त तीर्थरु, श्री पति तीर्थरु मत्तु क०बालूरु रामच०द्र तीर्थरु. मॊदलाद महनीयरु.
यादवार्यर( १५४१-१६४६) ग्र०थगळु:
१) श्री वेदव्यास गद्यम् २) श्री(वेदव्यास)करावल०बन स्तोत्रम्,
३)दारिद्र्यहर स्तोत्रम्
४)श्रीलक्ष्म्यष्टकम्
५)श्री मध्वस्तुतिः
६)श्री पूर्णप्रज्न ग्र०थमलिका स्तुतिः
७)श्रीमद्भागवत तात्पर्य टीकाः
८)न्यायसुधा टिप्पणि
९)यमक भारत टीका
१०)तत्वस०ख्यान टीका
११)तत्वद्योत टिप्पणि
प्रमुखवादवुगळु.
श्री मध्व नवमिय शुभ स०दर्भदल्लि यादवार्यर स्मरिसि, अचार्य मध्वर करुणक्कॆ पात्ररागोण.
श्रीकॄष्णार्पणमस्तु.
(आधार - श्री प्रभ०जनचार्यर श्री यादवार्य कॄतिम०जरी(१९८७))
hare SrInivAsa
madhva navarattrotsavada ShuBha samAramBhadalli kElavu apUrva sangatigaLannu tiLidukOLLONa. idu SrImadAchAryara anugrahakkE pAtrarAgalu Ondu mETTilu.
AchArya SrImadhvaru tamma sAkShAt SiShya trivikrama panDitAcAryarigE tamma brahmasUtraBAShyakk E TIkEyOndu rachisalu AdeShavittu,
jnAna kAryadalli grahasthAShramavEnd U aDDiyAgabekillavEnb a prameyavannu tiLisikOTTiddArE. idu grantha barEyaballa iDI grahastha vrandakke
nIDida AdeShavAgidE EndarU tappalla.
Aga trivikrama panDitara sahodara Shankara panDitaru, putra nArAyaNapanDitaru. ..anantara kAla kAlakkE
nUrAru grahastha viBhUtigaLu aneka rItiyalli jnAna prachura jIvana sAgisiddArE. aneka uttama TippaNigaLannu rachisi,
pAThapravacanagaLin da aneka ShiShyarugaLannu gaLisiddArE. tapaShyaktiyinda Artarannu udhdharisiddArE. samAjakkE sujnAnada bELakannu nIDiddArE.
idakkElla mUla kAraNa AchAryamadhvara AdeSha mudrEyEnbudu gamanIya amSha.
trivikrama panDitaru,nArAyaNap anDitaru mOdalAdavara kRUtigaLu SrIvyAsarAjaru, SrI vAdirAjaru, SrI rAGhavendraru muntAdavarinda udAhRUtavU AgidE.
intaha vidvAmsara aneka manEtanagaLu guru pITha paramparEgaLantE jnAna prachAradIkShE hOttu nUrAru varSha bALivE.
avugaLalli Adya, SrImuShNa, bidarahaLLi, linGeri, ChhalAri, umarjI, pAnDurangi, galagali, tAmraparNi mOdalAda aneka manEtanagaLu indigU sakrIyavAgi jIvantavivE.
gamanIyavAda gRUnthakAraralli, 'vAdaratnAvalI' viShNudAsAcAryaru, BhAgavata TippaNikArarAda SrI yAdavAryaru( 1541-1646) atyanta pramuKharu.
adarallU yAdavAryaradu adBhuta sAdhanE. ivara gurugaLu mahA tapasvigaLAda SrI vedeSha tIrtharu(yAdavAryar a pUrvAShramada aNNa, SrI raGhUttama tIrthara ShiShyaru). SrI vedeSha tIrtharu, yAdavAryara jnAnonnatigAgiyE pITha biTTaru. maNNUrinalliyE nElEsidaru.
grahasthagranthakAr arAgi pATha-pravacanagaLa nnu bahaLa vyApakavAgi naDEsida dAKhalE SrI yAdavAryaradu( 1541-1646).
I kELagina manEtanagaLu ivara pradhAna ShiShyarugaLAgi prasidhdhi hOndiddArE.
1) bidarahaLLi 2) li0geri 3)SarkarA 4)ba0kApura, 5)gUrjari, 6)umarjI, 7) AyI,
8) kADaNi
bidarahaLLi ShrInivAsatIrtharu ivara hattirada sambandhigaLU Agiddaru.
yAdavAryara samakAlInaru I kELaginavaru"
1) SrI raGhUttama tIrtharu 2)SrI vedavyAsa tIrtharu, 3)SrI vidyAdhISha tIrtharu, 4)SrI vedanidhi tIrtharu, 5)SrI satyavrata tIrtharu, 6)SrI sudhIndra tIrtharu,7)SrI rAGhavendra tIrtharu, 8)vyAsarAja maThada SrI lakShmIkAnta tIrtharu, SrI pati tIrtharu mattu kambAlUru rAmachandra tIrtharu. mOdalAda mahanIyaru.
yAdavAryara( 1541-1646) granthagaLu:
1) SrI vedavyAsa gadyam 2) SrI(vedavyAsa) karAvalambana stotram,
3)dAridryahara stotram
4)SrIlakShmyaShTaka m
5)SrI madhvastutiHi
6)SrI pUr^Naprajna granthamalikA stutiHi
7)SrImadBhAgavata tAtparya TIkAH
8)nyAyasudhA TippaNi
9)yamaka BhArata TIkA
10)tatvasamKhyAna TIkA
11)tatvodyota TippaNi
pramuKavAdavugaLu.
SrI madhva navamiya ShuBha sandarBhadalli yAdavAryara smarisi, achArya madhvara karuNakkE pAtrarAgoNa.
SrIkRUShNArpaNamast u.
(AdhAra - SrI praBa0janacAryara SrI yAdavArya kRUtima0jarI( 1987))
Subscribe to:
Post Comments (Atom)
No comments:
Post a Comment